ಇಳೆಯ ಮೇಲಿನ ನಕ್ಷತ್ರ - ಕಾದಂಬರಿ

ʻಇಳೆಯ ಮೇಲಿನ ನಕ್ಷತ್ರʼ ವೆಂಬ ಹೆಸರಿನಲ್ಲೇ ಮಿನುಗಿದೆ ಬೆಳಕಿದೆ. ಕತ್ತಲನ್ನು ಹೊಡೆದೋಡಿಸುವ ಸಂಕಲ್ಪವಿದೆ. ಕಾದಂಬರಿಯನ್ನು ಓದಿದ ಓದುಗನಿಗೆ ಸಂಕಲ್ಪ ಅವರು ಸಾಹಿತ್ಯ ಪ್ರೇಮ ಮತ್ತು ಮಾನವೀಯತೆಯ ರಾಯಭಾರಿಯಂತೆ ಭಾಸವಾಗುತ್ತಾರೆ. ತನ್ನವರಲ್ಲಿನ ಒಡಕು ಮುಚ್ಚಿ ಮರ್ಯಾದೆಯನ್ನು ಕಾಪಾಡಲು ನಿರಂತರ ಯತ್ನಿಸುವ ಕರುಣಾಮಯಿ ಅರುಂಧತಿಯ ಪಾತ್ರವಂತೂ ಕಾದಂಬರಿಯ ತುಂಬಾ ಆವರಿಸಿಕೊಂಡಿದೆ. ಕುಟುಂಬಗಳಲ್ಲಿ ಸಾಮರಸ್ಯ ತರಲು ತನ್ನನ್ನು ತಾನು ತೇಯ್ದುಕೊಂಡು ಪರಿಮಳ ಸೂಸುವ ಗಂಧದಂತೆ ಕಾಣುತ್ತಾಳೆ. ಕಾದಂಬರಿಯ ಕೊನೆಯಲ್ಲಿ ಓದುಗರಿಗೆ ಆತಂಕ ಹುಟ್ಟಿಸಿ ಮರು ಓದುಗೆ ಪ್ರೇರಣೆ ನೀಡುತ್ತದೆ. ಇಲ್ಲಿ ಬರುವ ಎಲ್ಲಾ ಪಾತ್ರಗಳ ಹೆಸರುಗಳನ್ನು ಒಮ್ಮೆ ಗಮನಿಸಿ. ಜ್ಯೇಷ್ಠ, ಪುನರ್ವಸು, ಅರುಂಧತಿ, ಶ್ರವಣ, ರೋಹಿಣಿ, ಪೂರ್ವಪಲ್ಗಣಿ. ಶತತಾರ, ಮೃಗಶಿರ ಹೀಗೆ ಎಲ್ಲವೂ ನಭದಲ್ಲಿ ಮಿನುಗುವ ನಕ್ಷತ್ರಗಳೇ ಆಗಿವೆ. ಲೇಖಕರು ತಾವು ಸೃಷ್ಟಿಸಿದ ಪಾತ್ರಗಳಿಗೆ ನಕ್ಷತ್ರಗಳ ಹೆಸರನ್ನೇ ನಾಮಃಕರಿಸಿ, ಮನುಷ್ಯನೂ ಕತ್ತಲಂತಾಗದೆ ನಕ್ಷತ್ರಗಳಂತೆ ಮಿನುಗಿ ಬೆಳಕಾಗಲಿ ಎಂಬ ಸಂದೇಶ ಸಾರ ಹೊರಟಂತಿದೆ. ಲೇಖಕರಿಗೆ ಭಾಷೆಯ ಮೇಲೆ ಹಿಡಿತವಿದೆ. ನಿರೂಪಣಾ ಶೈಲಿಯೂ ಗೊತ್ತಿದೆ. ಓದುಗರ ಮನಮಿಡಿಯುವಂತೆ ಕಥೆಯನ್ನು ಕಟ್ಟುವ ಕಲೆಯೂ ಕರಗತವಾಗುತ್ತದೆ. ಮುಂದಿನ ದಿನಗಳಲ್ಲಿ ಸಂಕಲ್ಪ ಅವರು ಮತ್ತಷ್ಟು ಕೃತಿಗಳನ್ನು ಕನ್ನಡ ಸಾರಸತ್ವ ಲೋಕಕ್ಕೆ ನೀಡಲಿ ಎಂದಾಶಿಸಿ ಅಭಿನಂದಿಸುತ್ತೇನೆ.    

ಡಾ. ಬಿ. ಎಲ್.‌ ವೇಣು

ಖ್ಯಾತ ಕಾದಂಬರಿಕಾರರು. ಚಿತ್ರದುರ್ಗ


ಸಂಕಲ್ಪ (ಸದಾಶಿವ ಡಿ ಓ)


Instamojo

Want to create landing pages for your business? Visit Instamojo Smart Pages and get started!